Mekedatu project: ನಾನು ಜಲ ಸಂಪನ್ಮೂಲ ಖಾತೆ ಪಡೆದಿದ್ದು ಏಕೆ? ಸಕಾರಣ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್
Mekedatu project: ಮೇಕೆದಾಟು ಯೋಜನೆ ಬಗ್ಗೆ ಬದ್ಧತೆ ಇರುವ ಕಾರಣಕ್ಕೆ ನಾವು ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಯೋಜನೆಯನ್ನು ಮಾಡಲೇಬೇಕು ಅಂತಲೇ…
Mekedatu project: ನಾನು ಜಲ ಸಂಪನ್ಮೂಲ ಖಾತೆ ಪಡೆದಿದ್ದು ಏಕೆ? ಸಕಾರಣ ಕೊಟ್ಟ ಡಿಸಿಎಂ ಡಿ.ಕೆ. ಶಿವಕುಮಾರ್
Mekedatu project: ಮೇಕೆದಾಟು ಯೋಜನೆ ಬಗ್ಗೆ ಬದ್ಧತೆ ಇರುವ ಕಾರಣಕ್ಕೆ ನಾವು ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಳ್ಳುತ್ತಿದ್ದೇವೆ. ಈ ಯೋಜನೆಯನ್ನು ಮಾಡಲೇಬೇಕು ಅಂತಲೇ ನಾನು ನೀರಾವರಿ ಇಲಾಖೆಯ ಜವಾಬ್ದಾರಿ ತೆಗೆದುಕೊಂಡಿದ್ದೇನೆ ಡಿ.ಕೆ. ಶಿವಕುಮಾರ್ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದಾರೆ.

ಬೆಂಗಳೂರು: ಡಿಸಿಎಂ ಡಿ.ಕೆ. ಶಿವಕುಮಾರ್ (DK Shivakumar) ಅವರು ನೀರಾವರಿ ಖಾತೆಯನ್ನು ಏಕೆ ತೆಗೆದುಕೊಂಡರು? ತಮಗೇ ಈ ಖಾತೆ ಬೇಕು ಎಂದು ಅವರು ಪಟ್ಟು ಹಿಡಿದಿದ್ದು ಏಕೆ? ಎಂದು ಹಲವು ಬಾರಿ ಚರ್ಚೆಯಾದ ವಿಚಾರವಾಗಿತ್ತು. ಆದರೆ, ಈಗ ಇದಕ್ಕೆ ಸ್ವತಃ ಡಿಕೆಶಿ ಕಾರಣವನ್ನು ಹೇಳಿದ್ದಾರೆ. ಅವರು ಜಲ ಸಂಪನ್ಮೂಲ ಖಾತೆಯನ್ನು (Water Resources) ಪಡೆದುಕೊಳ್ಳಲು “ಮೇಕೆದಾಟು” ಯೋಜನೆಯೇ (Mekedatu project) ಕಾರಣವಂತೆ.
ಕರ್ನಾಟಕದಲ್ಲಿ ನೀರಿನ ಸಮಸ್ಯೆ ತಲೆದೋರುತ್ತಿದೆ. ಅಲ್ಲದೆ, ಬೆಂಗಳೂರು ದಿನೇ ದಿನೆ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ನೀರಿಗೆ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ. ಅಲ್ಲದೆ, ಪ್ರತಿ ವರ್ಷ ಮಳೆ ಸರಿಯಾಗಿ ಆಗದೇ ಇದ್ದಾಗ ತಮಿಳುನಾಡಿಗೆ ನೀರು ಬಿಡುವ ವಿಷಯದಲ್ಲಿ ಸಮಸ್ಯೆ ಆಗುತ್ತಲೇ ಇದೆ. ಇದಕ್ಕೆ ಪರಿಹಾರವನ್ನು ಕಂಡುಕೊಳ್ಳಬೇಕೆಂದರೆ ಮೇಕೆದಾಟು ಯೋಜನೆ ಜಾರಿಗೆ ಬರಬೇಕು ಎಂಬುದು ಕಾಂಗ್ರೆಸ್‌ನ ವಾದವಾಗಿದೆ. ಈ ಸಂಬಂಧ ಈ ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಆಗಿನ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆಯನ್ನು ಸಹ ಕೈಗೊಳ್ಳಲಾಗಿತ್ತು. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಬಜೆಟ್‌ನಲ್ಲಿ ಸಹ ಮೇಕೆದಾಟು ಯೋಜನೆಯನ್ನು ಪ್ರಸ್ತಾಪ ಮಾಡಿದೆ.
First Published on Vistara News.
메타데이터
- post_id
- 413ef376e217
- slug
- mekedatu-project-ನಾನು-ಜಲ-ಸಂಪನ್ಮೂಲ-ಖಾತೆ-ಪಡೆದಿದ್ದು-ಏಕೆ-ಸಕಾರಣ-ಕೊಟ್ಟ-ಡಿಸಿಎಂ-ಡಿ-ಕೆ-ಶಿವಕುಮಾರ್-413ef376e217
- url
- https://medium.com/@vistaranews/mekedatu-project-%E0%B2%A8%E0%B2%BE%E0%B2%A8%E0%B3%81-%E0%B2%9C%E0%B2%B2-%E0%B2%B8%E0%B2%82%E0%B2%AA%E0%B2%A8%E0%B3%8D%E0%B2%AE%E0%B3%82%E0%B2%B2-%E0%B2%96%E0%B2%BE%E0%B2%A4%E0%B3%86-%E0%B2%AA%E0%B2%A1%E0%B3%86%E0%B2%A6%E0%B2%BF%E0%B2%A6%E0%B3%8D%E0%B2%A6%E0%B3%81-%E0%B2%8F%E0%B2%95%E0%B3%86-%E0%B2%B8%E0%B2%95%E0%B2%BE%E0%B2%B0%E0%B2%A3-%E0%B2%95%E0%B3%8A%E0%B2%9F%E0%B3%8D%E0%B2%9F-%E0%B2%A1%E0%B2%BF%E0%B2%B8%E0%B2%BF%E0%B2%8E%E0%B2%82-%E0%B2%A1%E0%B2%BF-%E0%B2%95%E0%B3%86-%E0%B2%B6%E0%B2%BF%E0%B2%B5%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D-413ef376e217
- canonical_url

- author_url
- https://medium.com/@vistaranews
- status
- ok
- fetched_at
- 2026-06-26 03:39:16