ಕವಲು ದಾರಿಯಲ್ಲಿ ಡಿ.ಕೆ.ಶಿವಕುಮಾರ್ ?
ಕಾಂಗ್ರೆಸ್ಸಿನ ಬಣ ಬಡಿದಾಟ ಈಗ ವಿಕೋಪಕ್ಕೆ ಹೋಗಿದೆ. ಮೊನ್ನೆಯಷ್ಟೆ ವೀರಪ್ಪ ಮೌಯ್ಲಿ ಡಿಕೆಶಿ ಪರ ಬ್ಯಾಟಿಂಗ್ ಮಾಡಿದ್ದ್ಡಾರೆ ಇದಕ್ಕೆ ಪ್ರತಿಯಾಗಿ ಸಿದ್ದು ಬಣ ಕೆರಳಿ…
ಕವಲು ದಾರಿಯಲ್ಲಿ ಡಿ.ಕೆ.ಶಿವಕುಮಾರ್ ?

ಕಾಂಗ್ರೆಸ್ಸಿನ ಬಣ ಬಡಿದಾಟ ಈಗ ವಿಕೋಪಕ್ಕೆ ಹೋಗಿದೆ. ಇತ್ತೀಚೆಗೆ ದೆಹಲಿಯಲ್ಲಿ ಪರಸ್ಪರ ಶಕ್ತಿ ಪ್ರದರ್ಶನದಲ್ಲಿ ತೊಡಗಿದೆ ಡಿ.ಕೆ.ಶಿ ಮತ್ತು ಸಿದ್ಧರಾಮಯ್ಯನವರ ಕಥೆ ಗೆದ್ದವನು ಸೋತ ಸೋತವನು ಸತ್ತ ಎಂಬಂತಿದೆ. ಡಿ.ಕೆ.ಶಿ ಪರ ಬ್ಯಾಟಿಂಗ್ ಮಾಡುತ್ತಿರುವ ಶಾಸಕರು ಸಂಖ್ಯೆ ತೀರಾನೆ ಕಮ್ಮಿಯಿದೆ ಅವರಿಗೆ ಎಲ್ಲಾ ಶಾಸಕರ ಬೆಂಬಲವಿಲ್ಲ ಎಂದು ಖಾರವಾಗಿ ಸಿದ್ಧರಾಮಯ್ಯ ನುಡಿದಿದ್ದಾರೆ , ಮುಖ್ಯಮಂತ್ರಿ ಬದಲಾವಣೆಯ ಮಾತಿಗೆ ಶಾಶ್ವತವಾಗಿ ತಿಲಾಂಜಲಿ ಹಾಡುವ ಪ್ರಯತ್ನ ಅವರದ್ದಾಗಿದೆ. ಆದರೆ ಸಾಸಿವೆ ಕಾಳಷ್ಟು ನೈತಿಕತೆ ಇಲ್ಲದ ಮುಖ್ಯಮಂತ್ರಿ ಶಾಸಕಾಂಗ ಸಭೆ ಕರೆದು ಶಾಸಕರ ವಿಶ್ವಾಸ ಮತ್ತು ಬೆಂಬಲ ನನ್ನ ಬಳಿಯಿದೆ ಎಂದು ನಿರೂಪಿಸಬಹುದಿತ್ತು , ಆದರೇ ಆ ರೀತಿ ಮಾಡಿದರೆ ತಮ್ಮ ಕಥೆ ಮುಗಿದು ಮೈಸೂರಿನಲ್ಲಿ ನೂತನವಾಗಿ ನಿರ್ಮಿತವಾದ ತಮ್ಮ ಅರಮನೆಗೆ ಶಾಶ್ವತವಾಗಿ ಹೋಗಬೇಕಾದೀತು ಅನ್ನುವುದು ಅವರಿಗು ಗೊತ್ತಿರುವ ಕಹಿಸತ್ಯವಷ್ಟೇ. ಅತ್ಯಂತ ಮಹತ್ವದ ವಿಚಾರವೇನೆಂದರೆ ಕಾಂಗ್ರೆಸ್ಸಿನ ಈ ಬೆಳವಣಿಗೆ ಹೊಸದೇನೂ ಅಲ್ಲಾ ಮತ್ತು ಹಿಂದೆ ಮಾಡಿದ ತಪ್ಪುಗಳಿಂದ ಅವರು ಪಾಠವನ್ನೂ ಕಲಿತಂತಿಲ್ಲಾ
ಕಳೆದ 5 ವರ್ಷಗಳಲ್ಲಿ ದೇಶದ ಉದ್ದಗಲಕ್ಕೂ ಕಾಂಗ್ರೆಸ್ ತನ್ನ ಸ್ವಯಂ ಕೃತ ಅಪರಾದದಿಂದ ನೆಲಕಚ್ಚಿದ ಉದಾಹರಣೆಗಳನ್ನ ಒಮ್ಮ ಅವಲೋಕಿಸೋಣ, ಮೊದಲು ಕ್ಯಾಪ್ಟನ್ ಅಮರಿಂದರ್ ಸಿಂಗ್ ಪಕ್ಷವನ್ನ ಬಿಟ್ಟು ಹೊರ ನಡೆದು ನಂತರ ನವಜೋತ್ ಸಿಂಗ್ ಸಿದ್ಧು ಮತ್ತು ಚರಣ್’ಜೀತ್ ಸಿಂಗ್ ಚನ್ನಿ ನಡುವ ನಡೆದ ಸಮರದಿಂದ ಪಂಜಾಬ್’ನಲ್ಲಿ ಕಾಂಗ್ರೆಸ್ ಸಂಪೂರ್ಣವಾಗಿ ನೆಲ ಕಚ್ಚುವಂತೆ ಮಾಡಿತ್ತು.
ಇನ್ನು ಮಧ್ಯ ಪ್ರದೇಶದಲ್ಲಿ ಕಮಲ್ ನಾಥ್ ಮತ್ತು ಜ್ಯೋತಿರಾದಿತ್ಯ ಸಿಂಧಿಯಾ ನಡುವೆ ಇದೇ ರೀತಿ ಸಮರ ಶುರುವಾದಾಗ ಕಾಂಗ್ರೆಸ್ಸಿನಲ್ಲಿ ತಮಗೆ ಭವಿಷ್ಯವಿಲ್ಲ ಎಂಬ ಕಟುಸತ್ಯವನ್ನ ಅರಿತು ಜ್ಯೋತಿರಾದಿತ್ಯ ಭಾರತೀಯ ಜನತಾ ಪಕ್ಷಕ್ಕೆ ಸೇರಿ ಈಗ ಕೇಂದ್ರ ಸಚಿವರಾಗಿದ್ದಾರೆ , ಮಧ್ಯಪ್ರದೇಶದಲ್ಲಿ ಕಳೆದ 22 ವರ್ಷದಿಂದ ಕಾಂಗ್ರೆಸ್ ಸೋತು ಸುಣ್ಣವಾಗಿದೆ.
ರಾಜಸ್ಥಾನದಲ್ಲಿ ಅಶೋಕ್ ಘೆಹ್ಲೋತ್ ಮತ್ತು ಸಚಿನ್ ಪೈಲೆಟ್ ನಡುವೆ ಈಗಲೂ ಜ್ವಲಂತವಾಗಿರುವ ಭಿನ್ನಾಭಿಪ್ರಾಯ ಶಮನವಾಗಿಲ್ಲ, ಪಕ್ಷ ಅಲ್ಲಿಯೂ ಚುನಾವಣೆಯಲ್ಲಿ ನೆಲ ಕಚ್ಚಿದೆ.
ಇನ್ನೂ ಛತ್ತೀಸ್ಗಡದಲ್ಲಿ ಎಲ್ಲಾ ಚುನಾವಣ ಪೂರ್ವ ಸಮೀಕ್ಷೆಗಳು ಕಾಂಗ್ರೆಸ್ಸಿಗೆ ಗೆಲುವು ಎಂದಿದರೂ ಭಾ.ಜ.ಪ ಗೆದ್ದು ಬೀಗಿತು ಅದಕ್ಕೆ ಮುಖ್ಯ ಕಾರಣ ಟಿ.ಎಸ್.ಸಿಂಗ್ ಡಿಯೊ ಮತ್ತು ಭೂಪೇಶ್ ಭಾಗೇಲ್ ನಡುವಿನ ಶೀತಲ ಸಮರ , ಮುಖ್ಯ ಮಂತ್ರಿ ಕುರ್ಚಿಗೆ ನಡೆದ ಪರಸ್ಪರ ಕಾದಟ.
ಈಗ ತೇಟ್ ಇದೇ ಪ್ಯಾಟರ್ನ್ ಕರ್ನಾಟಕದಲ್ಲೂ ಶುರುವಾಗಿದೆ. ಡಿ.ಕೆ.ಶಿ ಮುಖ್ಯಮಂತ್ರಿಯಾಗಬೇಕು ಎಂಬ ನ್ಯಾಯ ಸಮ್ಮತವಾದ ಬೇಡಿಕೆಗೆ ಈಗ ಹೈ ಕಮಾಂಡ್ ಉಲ್ಟಾಹೊಡೆಯುತ್ತಿದೆ. 2023ರರ ಚುನಾವಣೆಯಲ್ಲಿ ತಮ್ಮ ಸಂಪನ್ಮೂಲವನ್ನೆಲ್ಲಾ ಧಾರೆಯೆರೆದು ಪಕ್ಷವನ್ನ ಸಂಘಟಿಸಿ 130 ಸೀಟು ಗೆಲ್ಲಿಸಿ ಅಧಿಕಾರಕ್ಕೆ ತರಲು ಡಿ.ಕೆ.ಶಿವಕುಮಾರ್ ವಹಿಸಿದ ಶ್ರಮ ಅಷ್ಟಿಷ್ಟಲ್ಲ , ಅದೊಂದು ಅವಿರಥ ಪ್ರಯತ್ನವೇ ಆಗಿತ್ತು . ಅಂದು ಸಿದ್ದರಾಮಯ್ಯ ತಮಗೆ ಯಾವ ಸೀಟು ಸೇಫ್, ತಾವು ಎಲ್ಲಿ ನಿಂತರೆ ಗೆಲ್ಲುತ್ತೇನೆ ಎಂಬ ದುಗುಡದಲ್ಲಿದ್ದರು, ಸ್ವತಃ ತಮ್ಮ ಮಗ ಯತೀಂದ್ರನೇ ವರುಣ ಬಿಟ್ಟುಕೊಡಬೇಕಾಯಿತು. ಇಷ್ಟಾಗಿಯೂ ಚುನಾವಣೆ ಗೆದ್ದ ನಂತರ ಮುಖ್ಯಮಂತ್ರಿ ಸ್ಥಾನದಲ್ಲಿ 2ನೇ ಬಾರಿಗೆ ಸಿದ್ಧರಾಮಯ್ಯರನ್ನೇ ಹೈಕಮಾಂಡ್ ಪ್ರತಿಷ್ಠಾಪಿಸಿದ್ದು ಅತ್ಯಂತ ಆಶ್ಚರ್ಯಕರ ಬೆಳವಣಿಗೆ
ಇನ್ನೂ ತಮಗೆ ಮುಖ್ಯಮಂತ್ರಿ ಗಾದಿ ಸಿಗುತ್ತದೆ , ಕಾಲ ಕೂಡಿಬರಲಿ ಎಂದು ಅತ್ಯಂತ ತಾಳ್ಮೆ ಮತ್ತು ಸಹನೆಯಿಂದ ಇದ್ದ ಡಿ.ಕೆ.ಶಿವಕುಮಾರ್’ಗೆ ಸಿಕ್ಕಿದ್ದು ಮಾತ್ರ ಖೋತ . ಡಿಕೆಶಿ ದೆಹಲಿಗೆ ಪದೇ ಪದೇ ಪ್ರಯಾಣ ಬೆಳಿಸಿ ತಮ್ಮ ಸರ್ವೋಚ್ಛ ನಾಯಕನಾದ ರಾಹುಲ್ ಗಾಂಧಿಯನ್ನ ಬೇಡುವ ದುರ್ದೈವ ಪರಿಸ್ಥಿತಿ ಬಂದೇಬಿಟ್ಟಿದೆ. ಇವೆಲ್ಲವೂ ತಮ್ಮ ತನು ಮನ ಧನ ಸರ್ವಸ್ವವನ್ನು ಅರ್ಪಿಸಿ ಪಕ್ಷಕ್ಕೆ ದುಡಿದ ಶಿಸ್ತಿನ ಸಿಪಾಯಿಗೆ ಸಹಿಸಲಾಗದಷ್ಟು ಅವಮಾನವಾಗಿ ಇನ್ನೇನು ಈಗಲೋ ಆಗಲೋ ಸ್ಫುಟಿದೇಳುವ ಸಂದೇಶವನ್ನ ಹೊರಹಾಕಿದ್ದಾರೆ.
ವಾಸ್ತವದಲ್ಲಿ ನಾವು ಅರ್ಥಮಾಡಿಕೊಳ್ಳಬೇಕಾದ ಕಟುಸತ್ಯವೇನೆಂದರೆ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿಗೆ ಡಿ.ಕೆ.ಶಿ ಪ್ರಬಲ ನಯಕನಾಗಿ ಬೆಳೆಯುವುದು ಇಷ್ಟವಿಲ್ಲದಂತೆ ಕಾಣುತ್ತಿದೆ , ಒಂದು ರೀತಿ ಅಭದ್ರತೆ , ಅಂಜಿಕೆ ರಾಹುಲ್ ಗಾಂಧಿಗೆ ಇರುವಂತೆ ಕಾಣುತ್ತಿದೆ. ಇದೇ ರೀತಿಯ ಭಾವನೆ ಸಚಿನ್ ಪೈಲಟ್ ವಿರುದ್ಧವೂ ಇದೇ ಎನ್ನುವುದು ಹಲವರ ಅಭಿಪ್ರಾಯವಾಗಿದೆ .
ಡಿ.ಕೆ.ಶಿ’ಯನ್ನು ಹಣಿಯಲು ರಾಹುಲ್ ಗಾಂಧಿ ಅಪ್ತವಲಯದಲ್ಲಿ ಗುರುತಿಸಿಕೊಂಡಿರುವ ಖರ್ಗೆ’ರವರ ಪಾತ್ರವೂ ಇದೆ ಅನ್ನುವುದು ರಾಜಕೀಯ ಪಡಸಾಲೆಯಲ್ಲಿ ಪ್ರಸ್ತುತ ಇರುವ ಬಿಸಿ ಬಿಸಿ ಚರ್ಚಾ ವಸ್ತು, ಈ ಹಿಂದೆ ರಾಜ್ಯ ಮಟ್ಟದ ನಾಯಕರಲ್ಲಿ ಭಿನ್ನಾಭಿಪ್ರಾಯ ಮೂಡಿದಾಗ ಅದನ್ನ ಯಶಸ್ವಿಯಾಗಿ ಶಮನ ಮಾಡಿದ ಉದಾಹರಣೆಯೇ ರಾಹುಲ್ ಗಾಂಧಿ ನಾಯಕತ್ವದಲ್ಲಿ ಎಂದೂ ಸಹ ನಾವುಕಂಡಿಲ್ಲಾ
ಜನತಾ ದಳದಿಂದ ಬಂದ ಸಿದ್ಧಾರಮಯ್ಯರೇ ಹೆಚ್ಚು ಆಪ್ಯಾಯಮಾನವೆಂಬ ಸಂದೇಶ ಡಿ.ಕೆ.ಶಿ’ಗೆ ಸಿಕ್ಕಂತಿದೆ. ಕಾಂಗ್ರೆಸ್ ದೇಶದ ಉದ್ದಗಲಕ್ಕೂ ನೆಲ ಕಚ್ಚಲು ಅಸಮರ್ಥ ಹೈಕಮಾಂಡ್ ಮತ್ತು ದೀರ್ಘಕಾಲದ ಅನಿರ್ದಿಷ್ಟತಯೇ (indecision) ಮುಖ್ಯ ಕಾರಣ. ರಾಹುಲ್ ಗಾಂಧಿ ಮುಂದೆ ನಿಂತು “Power Transition” ಮಾಡಿಸುತ್ತಾರೆ ಎಂಬ ಡಿ.ಕೆ ಶಿ ನಿರೀಕ್ಷೆ ಸಂಪೂರ್ಣ ಹುಸಿಯಾದಂತಿದೆ.
ಇತ್ತೀಚೆಗೆ ಕರ್ನಾಟಕ ಉಚ್ಛನ್ಯಾಯಾಲಯದಲ್ಲಿ ಈ ಹಿಂದೆ ಸಿ.ಬಿ.ಐ ತನಿಖೆಗೆ ಅನುಮತಿ ನಿರಾಕರಿಸಲು ಸಲ್ಲಿಸಿದ ಅಫಿಡವಿಟ್’ನಲ್ಲಿ ತಾಂತ್ರಿಕ ದೋಶವಿದೆ, ಅದನ್ನ ಹಿಂಪಡೆದು ಮತ್ತು ಹೊಸ ಅಫಿಡವಿಟ್ ಸಲ್ಲಿಸುತ್ತೇವೆ ಎಂಬ ಸರ್ಕಾರದ ನಡೆ , ಡಿ.ಕೆ.ಶಿ’ಯನ್ನ ಮತ್ತಷ್ಟು ಕೆಣಕುವ ವಿಕೃತ ಹುನ್ನಾರದಂತಿದೆ
ಹುಟ್ಟು ಹೋರಾಟಗಾರರಾದ ಶಿವಕುಮಾರ್ ಸುಮ್ನೆ ಕೂರುವ ಜಾಯಮಾನದವರಂತೂ ಅಲ್ಲಾ, ಅವರ ಹೆಜ್ಜೆ ಏಕನಾಥ್ ಶಿಂಧೆ’ರವರ ಮಾದರಿಯಲ್ಲಿರುತ್ತದೋ ಅಥವ ಶರದ್ ಪವಾರ್ ಮಾದರಿ ಇರುತ್ತದೋ ಇಲ್ಲವೇ ಜಗನ್ ಮಾದರಿ ಇರುತ್ತದೋ ಕಾದು ನೋಡಬೇಕಿದೆ. ಕನಕಪುರದ ಬಂಡೆ ಜಗ್ಗಲ್ಲ, ಬಗ್ಗಲ್ಲ , ಕುಗ್ಗಲ್ಲ ಅನ್ನುವುದಷ್ಟೇ ಅನಂತ ಸತ್ಯ !
메타데이터
- post_id
- 6b87d015fc58
- slug
- ಕವಲು-ದಾರಿಯಲ್ಲಿ-ಡಿ-ಕೆ-ಶಿವಕುಮಾರ್-6b87d015fc58
- url
- https://medium.com/@sureshnelamangala/%E0%B2%95%E0%B2%B5%E0%B2%B2%E0%B3%81-%E0%B2%A6%E0%B2%BE%E0%B2%B0%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%A1%E0%B2%BF-%E0%B2%95%E0%B3%86-%E0%B2%B6%E0%B2%BF%E0%B2%B5%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D-6b87d015fc58
- canonical_url
- https://medium.com/@sureshnelamangala/%E0%B2%95%E0%B2%B5%E0%B2%B2%E0%B3%81-%E0%B2%A6%E0%B2%BE%E0%B2%B0%E0%B2%BF%E0%B2%AF%E0%B2%B2%E0%B3%8D%E0%B2%B2%E0%B2%BF-%E0%B2%A1%E0%B2%BF-%E0%B2%95%E0%B3%86-%E0%B2%B6%E0%B2%BF%E0%B2%B5%E0%B2%95%E0%B3%81%E0%B2%AE%E0%B2%BE%E0%B2%B0%E0%B3%8D-6b87d015fc58
- author_url
- https://medium.com/@sureshnelamangala
- status
- ok
- fetched_at
- 2026-06-26 03:39:16