Phone Tapping: ಎಚ್‌ಡಿಕೆ ಫೋನ್ ಟ್ಯಾಪ್ ಮಾಡೋಕೆ, ಅವರೇನು ಟೆರರಿಸ್ಟಾ? ಎಂದ ಡಿಕೆಶಿ
Phone Tapping: ರಾಜ್ಯ ಸರ್ಕಾರ ರೇವಣ್ಣ-ಕುಮಾರಸ್ವಾಮಿ ಅವರ ಫೋನ್ ಕದ್ದಾಲಿಕೆ ಮಾಡುತ್ತಿದೆ ಎಂಬ ಆರೋಪದ ಬಗ್ಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.

ಬೆಂಗಳೂರು: ರಾಜ್ಯ ಸರ್ಕಾರ ಫೋನ್ **ಟ್ಯಾಪಿಂಗ್** (Phone Tapping) ಮಾಡುತ್ತಿದೆ ಎಂಬ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರ ಆರೋಪಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ. ಪೋನ್ ಕದ್ದಾಲಿಕೆ ಸರ್ಕಾರ ಮಾಡಿಲ್ಲ. ಅಂಥ ಮುಟ್ಟಾಳ್ ಕೆಲಸ ನಮ್ಮ ಸರ್ಕಾರ ಮಾಡಲ್ಲ. ಫೋನ್ ಕದ್ದಾಲಿಸಲು ಅವರೇನು ಭಯೋತ್ಪಾದಕರಾ? ಅವರು ನಮ್ಮ ನಾಯಕರು ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರೇವಣ್ಣ-ಕುಮಾರಸ್ವಾಮಿ ಫೋನ್ ಕದ್ದಾಲಿಕೆ ಸರ್ಕಾರ ಮಾಡುತ್ತಿದೆ ಎಂಬ ಆರೋಪದ ಬಗ್ಗೆ ನಗರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ.
ಇನ್ನು ಸಿಡಿ ಶಿವು ಎಂಬ ಎಚ್‌ಡಿಕೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ನನಗೂ ಅದಕ್ಕೂ ಯಾವುದೇ ತರಹದ ಸಂಬಂಧವಿಲ್ಲ. ಅದಕ್ಕೆ ಉತ್ತರ ಕೊಡುವ ಸಂದರ್ಭ ಇಲ್ಲ. ನನ್ನ ಹೆಸರು ಹೇಳಲಿಲ್ಲ ಅಂದ್ರೆ ಎಂದರೆ ಅವರಿಗೆ ನಿದ್ದೆ ಬರುವುದಿಲ್ಲ. ಮಾಧ್ಯಮಗಳು ಎಥಿಕ್ಸ್ ಬಿಟ್ಟು ಅನೇಕ ವಿಚಾರಗಳು ಚರ್ಚೆ ಮಾಡುತ್ತೀದ್ದೀರಿ, ಉಪ್ಪು ತಿಂದವರು ನೀರು ಕುಡಿಯಬೇಕು ಎಂದು ಅವರು ಹೇಳಿದ್ದಾರೆ. ಕಾನೂನು ಇದೆ, ಕಾನೂನು ಪ್ರಕಾರ ನಡೆಯುತ್ತದೆ. ಅವರು ಏನು ಬೇಕಾದರೂ ಹೇಳಲಿ ಎಂದು ಕಿಡಿಕಾರಿದ್ದಾರೆ…
First Published on Vistara News.
메타데이터
- post_id
- bfe8384d3d2c
- slug
- phone-tapping-ಎಚ್-ಡಿಕೆ-ಫೋನ್-ಟ್ಯಾಪ್-ಮಾಡೋಕೆ-ಅವರೇನು-ಟೆರರಿಸ್ಟಾ-ಎಂದ-ಡಿಕೆಶಿ-bfe8384d3d2c
- url
- https://medium.com/@vistaranews/phone-tapping-%E0%B2%8E%E0%B2%9A%E0%B3%8D-%E0%B2%A1%E0%B2%BF%E0%B2%95%E0%B3%86-%E0%B2%AB%E0%B3%8B%E0%B2%A8%E0%B3%8D-%E0%B2%9F%E0%B3%8D%E0%B2%AF%E0%B2%BE%E0%B2%AA%E0%B3%8D-%E0%B2%AE%E0%B2%BE%E0%B2%A1%E0%B3%8B%E0%B2%95%E0%B3%86-%E0%B2%85%E0%B2%B5%E0%B2%B0%E0%B3%87%E0%B2%A8%E0%B3%81-%E0%B2%9F%E0%B3%86%E0%B2%B0%E0%B2%B0%E0%B2%BF%E0%B2%B8%E0%B3%8D%E0%B2%9F%E0%B2%BE-%E0%B2%8E%E0%B2%82%E0%B2%A6-%E0%B2%A1%E0%B2%BF%E0%B2%95%E0%B3%86%E0%B2%B6%E0%B2%BF-bfe8384d3d2c
- canonical_url

- author_url
- https://medium.com/@vistaranews
- status
- ok
- fetched_at
- 2026-06-26 03:39:16